ಶಿಕ್ಷಣದ ಸಾವ೯ತ್ರಿಕರಣ ಮತ್ತು ಗುಣಾತ್ಮಕ ಶಿಕ್ಷಣದ ಆಶಯದನ್ವಯ ಶಿಕ್ಷಕ ಸ್ನೇಹಿಯಾಗಿ Labelsಗಳಲ್ಲಿ ಅಗತ್ಯ ಮಾಹಿತಿ ಇದೆ

ಸೂಚನೆ::-ಈ ಬ್ಲಾಗ್ ದಲ್ಲಿ ಅಳವಡಿಸಿರುವ ಮಾಹಿತಿಯು ಶಿಕ್ಷಕರಿಗೆ ಕಲಿಕಾ ಬೋಧನಾ ಸಹಾಯಕವಾಗುವ ನಿಟ್ಟಿನಲ್ಲಿ ರಚಿಸಲಾಗಿದೆ.ತಾಲೂಕಿನ/ಜಿಲ್ಲೆ/ರಾಜ್ಯದ ಹಲವು ಭಾಗದ ಶಿಕ್ಷಕರು ರಚಿಸಿದ ಸಾಹಿತ್ಯಗಳನ್ನು ಅಳವಡಿಸಲಾಗಿದೆ. ಅಗತ್ಯತೆ ಇರುವವರು ಪರಿಶೀಲಿಸಿ ಬಳಸುವುದು

Monday, October 19, 2020

''ಪ್ರತಿಬಿಂಬ''-ಗಣಿತ ಕಲಿಕಾ ಆಂದೋಲನ ಕುರಿತಾದ ಅನುಭವಾಮೃತ

ಹೊಸ ಮಾದರಿ ಕಲಿಕೆಗೆ ಪ್ರೇರಕವಾಗಿರುವ ಗಣಿತ ಕಲಿಕಾ ಆಂದೋಲನದ ಕುರಿತಾಗಿ ಹಂಚಿಕೊಂಡಿರುವ ಶಿಕ್ಷಕರ ಅನುಭವಾಮೃತದ ಮನದಾಳದ ನುಡಿ ನಮನಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ,
*ಸಂಚಿಕೆ 01 * 
ಶ್ರೀಮತಿ. ಮಮತಾ ಟಿ. ಸ.ಶಿ ನಾರಾಯಣಪುರ(ಗದಗ). ಅವರು ಸರ್ಕಾರಿ ಶಾಲೆಗಳು ಎಲ್ಲರಿಗೂ ಮಾದರಿಯಾಗಿ ಇರಬೇಕು ಅಂತ ನಂಬಿರುವಂತಹ ಅತ್ಯುತ್ತಮ ಶಿಕ್ಷಕಿ. ಈ ಸಂವಾದದಲ್ಲಿ ಅವರು ಶಾಲೆಯ ತೋಟ, ಸಸಿ ನೆಡುವ ಆಂದೋಲನ , ಇತರೆ  ಬಗ್ಗೆ ಮಾತನಾಡಲಿದ್ದಾರೆ.

* ಅನುಭವದ ಮಾತುಗಳನ್ನು ಕೇಳಲು ಈ ಲಿಂಕ್ ನ್ನು ಕ್ಲಿಕ್ ಮಾಡಿ*

*ಸಂಚಿಕೆ 02 :* 
ಮಕ್ಕಳಲ್ಲಿ ಹೇಗೆ ವ್ಯವಹಾರ ಜ್ಞಾನವನ್ನು ಬೆಳೆಸಬಹುದು,
ಚಿತ್ರದುರ್ಗದ ಕೋನಸಾಗರದ ಪ್ರೀತಿ ಎ. ಟಿ. ಯವರ ಸಂವಾದಕ್ಕೆ ನಿಮ್ಮೆಲ್ಲರಿಗೂ  ಸ್ವಾಗತ.ಅವರು  ಗಣಿತ ವಿಷಯವು ಶಿಕ್ಷಣದ ಎಲ್ಲ ಆಯಾಮಕ್ಕೆ ಅಡಿಪಾಯವಾಗಿದೆ ಅಂತ ಧೃಢವಾಗಿ ನಂಬಿದ್ದಾರೆ.  ವೃತ್ತಿ ಜೀವನಕ್ಕೆ ಪೂರಕವಾದ ಗಣಿತ ಕಲಿಕಾ ಆಂದೋಲನವು ಹೇಗೆ ಗ್ರಾಮ ಪಂಚಾಯ್ತಿ ಮಟ್ಟದ ಗಣಿತ ಸ್ಪರ್ಧೆಯಲ್ಲಿ ತಮ್ಮ ಮಕ್ಕಳು ಪಶಸ್ತಿಪಡೆಯಲು  ಸಹಕಾರಿಯಾಯಿತು ಎಂದು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ.

*ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ*

*ಸಂಚಿಕೆ 03 * 
ಮಕ್ಕಳಲ್ಲಿ ಕಲಿಕೆಯ ಬಗ್ಗೆ ಕುತೂಹಲವನ್ನು ಹೇಗೆ ಮೂಡಿಸುವುದು?

ಚಳ್ಳಕೆರೆಯ  ಶ್ರೀ.ಕೇಶವಮೂರ್ತಿ ಕೆ ಎಂ.  ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಿಂದ  ಈಗಿನವರೆಗಿನ   ಅನುಭವವನ್ನು ಹೇಳಿಕೊ೦ಡಿದ್ದಾರೆ. ಹಾಗೆಯೇ ಅವರ ವಿದ್ಯಾರ್ಥಿ ಗಳು ಅಬ್ಯಾಕಸ್ ಬಳಸಿ ಹೇಗೆ ಕಲಿಕೆಯಲ್ಲಿ ಸಾಧನೆಯನ್ನು ಮಾಡಿದರು ಅನ್ನುವ ಬಗ್ಗೆ  ಹಂಚಿಕೊ೦ಡಿದ್ದಾರೆ.

*ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಆಲಿಸಿರಿ*



 ಸಂಚಿಕೆ 04 : 
ಮಕ್ಕಳ ಸ್ವಯಂ ಕಲಿಕೆಯಲ್ಲಿ ಗಣಿತ ಕಿಟ್ ನ ಪಾತ್ರ

ತುಮಕೂರಿನ ಅಜ್ಜಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಹೇಮಾಕ್ಷಮ್ಮ  ಅವರು ತಮ್ಮ ಶಿಕ್ಷಕ ವೃತ್ತಿಯ ಅನುಭವಗಳ ಜೊತೆ  ಗಣಿತ ಕಲಿಕಾ ಆಂದೋಲನ ಹಾಗೂ ತರಗತಿ ನಿರ್ವಹಣೆಗೆ ಬಳಸುವ ವಿಧಾನಗಳ ಕುರಿತು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ .

ಈ ಲಿಂಕ್ ಅನ್ನು ಕ್ಲಿಕ್ ಮಾಡಿ

 ಸಂಚಿಕೆ: 05
 ಗ್ರಾಮೀಣ ಶಿಕ್ಷಣದ ಒಂದು ಒಳನೋಟ

 ಚಾಮರಾಜನಗರದ  M. N. Devaki ರವರ ಜೊತೆಗಿನ 
 ಶಿಕ್ಷಣ ಕ್ಷೇತ್ರದಲ್ಲಿ ಅವರು ನೋಡಿರುವಂತಹ ಬದಲಾವಣೆಗಳು , ಶಿಕ್ಷಕ ವೃತ್ತಿಯಲ್ಲಿ ಅವರಿಗಿರುವ ಆಸಕ್ತಿ ಹಾಗೂ ತಮ್ಮ ವಿದ್ಯಾರ್ಥಿಗಳ ಸ್ಪೂರ್ತಿದಾಯಕ ಕಥೆಗಳನ್ನ ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ

 ಸಂಚಿಕೆ: 06  
ವಿಜ್ಞಾನ ಹಾಗೂ ಮೌಲ್ಯ ಶಿಕ್ಷಣ

ಗದಗನ ಸೌಭಾಗ್ಯ ಪಾಟೀಲ ಅವರು ವಿಜ್ಞಾನ ಹಾಗೂ ಗಣಿತ ಶಿಕ್ಷಕರು. ಈ ಸಂಚಿಕೆಯಲ್ಲಿ ಅವರು ವಿಜ್ನಾನದ ಬೋಧನೆ, ಮೌಲ್ಯ ಶಿಕ್ಷಣದ ಅವಶ್ಯಕತೆ ಹಾಗೂ  ಪ್ರಶಸ್ತಿ ಪಡೆದ ಒಬ್ಬ ಬಾಲಕನ ಬಗ್ಗೆ ಮಾತನಾಡಲಿದ್ದಾರೆ.

*ಈ ಲಿಂಕ್ ಅನ್ನು ಕ್ಲಿಕ್ ಮಾಡಿ* 

*ಸಂಚಿಕೆ: 07,
ಗ್ರಾಮೀಣ ಶಿಕ್ಷಣ ಹಾಗೂ ಆಂಗ್ಲ ಭಾಷೆ*

 ಬೆಳಗಾವಿಯ ಸಂದೀಪ್ ಕುಲಕರ್ಣಿ ರವರು ಆಂಗ್ಲ ಭಾಷೆಯ ಶಿಕ್ಷಕರು. ಹೇಗೆ ಮಕ್ಕಳಲ್ಲಿ English ಬಗ್ಗೆ ಒಲವು ಮೂಡಿಸಬಹುದು ಎಂಬುದರ ಬಗ್ಗೆ  ಅವರು ಈ ಸಂಚಿಕೆಯಲ್ಲಿ ಮಾತನಾಡಲಿದ್ದಾರೆ. ಬನ್ನಿ ಕೇಳೋಣ.

*ಈ ಲಿಂಕ್ ಅನ್ನು ಕ್ಲಿಕ್ ಮಾಡಿ* *

ಸಂಚಿಕೆ:08
 ಮಾದರಿ ಶಾಲೆ
 ಚಾಮರಾಜ ನಗರದ ಟಿ ಜಿ ಟಿ ಶಿಕ್ಷಕರಾದ ಮಹೇಂದ್ರ ರವರು ಒಂದು ಸರ್ಕಾರಿ ಮಾದರಿ ಶಾಲೆಯನ್ನು ಕಟ್ಟುವುದರ ಬಗ್ಗೆ ಮಾತನಾಡಲಿದ್ದಾರೆ. ಬನ್ನಿ ಕೇಳೋಣ.
*ಈ ಲಿಂಕ್ ಅನ್ನು ಕ್ಲಿಕ್ ಮಾಡಿ* 


ನಿಮ್ಮ ಆಸಕ್ತಿದಾಯಕ ಕಥೆಗಳನ್ನು  ಪ್ರತಿಬಿಂಬ  ಪಾಡ್ಕ್ಯಾಸ್ಟ್ ನ ಮೂಲಕ  ಹಂಚಿಕೊಳ್ಳಬೇಕೆಂದು ಆಸೆಯಿದ್ದಲ್ಲಿ , ನಿಮ್ಮ ಧ್ವನಿಸುರುಳಿಯ ಆಡಿಯೋವನ್ನು ವಾಟ್ಸಾಪ್ ನಲ್ಲಿ ರೆಕಾರ್ಡ್  ಮಾಡಿ ನಮ್ಮ ಸಹಾಯವಾಣಿ ಸಂಖ್ಯೆಗೆ ಕಳಿಸಿ
 *98450 79590*

No comments:

Post a Comment

ಮನೆಯಲ್ಲೇ ಮಾಡೋಣ ಲೆಕ್ಕ-ಕಾರ್ಯಕ್ರಮ

ಪ್ರತಿ ವಾರ ಅಕ್ಷರ ತಂಡವು ನೀಡುವ ಹೊಸ ಕಲಿಕಾ ಪ್ಯಾಕೆಟ್ ಅನ್ನು ಇಲ್ಲಿ ನೀವು ನೋಡಬಹುದು. ಶಿಕ್ಷಕರು, ಪೋಷಕರು, ಸ್ವಯಂಸೇವಕರು ಹಾಗೂ ಮಕ್ಕಳ ಹಿತದೃಷ್ಟಿಯುಳ್...